ಒಂದಿಷ್ಟು ಮಧ್ಯಮ ವರ್ಗದ ಕುಟುಂಬಗಳಿಗೆ ಸೂರು ಕಲ್ಪಿಸಿರುವ ಬಹು ಮಹಡಿ ವಸತಿ ಸಂಕೀರ್ಣದ ಸಣ್ಣ ಅಪಾರ್ಟ್ಮೆಂಟ್ನಲ್ಲಿ ನಾವು ವಾಸಿಸಿದ್ದೇವೆ. ಆದರೆ, ನಮ್ಮ ವಸತಿ ಸಂಕೀರ್ಣವನ್ನು ಬಹಳ ಇಷ್ಟಪಡುತ್ತಿರುವ ಬೆಕ್ಕುಗಳ ಸಂಖ್ಯೆ ಬಹುಶಃ ಮಾನವರ ಸಂಖ್ಯೆಯನ್ನೂ ಮೀರಿಸಬಹುದು. ಏಕೆಂದರೆ ಹಿಂದಕ್ಕೆಳೆದುಕೊಳ್ಳಬಹುದಾದ ಪಂಜಗಳನ್ನು ಹೊಂದಿರುವ ಮತ್ತು ತಮ್ಮ ಸೋದರ ಸಂಬಂಧಿಗಳಾದ ಸಿಂಹ, ಹುಲಿ, ಕಾಡುಬೆಕ್ಕು ಮತ್ತು ಚಿರತೆಗಳ ಬಗ್ಗೆ ಜಂಭ ಕೊಚ್ಚಿಕೊಳ್ಳಬಹುದಾದ ಈ ಚತುಷ್ಪಾದಿಗಳು ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಯಾರಿಗೂ ಹೆದರುವುದಿಲ್ಲ. ಒಂಭತ್ತು ಜನ್ಮಗಳನ್ನು ಹೊಂದಿವೆ ಎಂದು ನಂಬಲಾಗುವ ಬೆಕ್ಕುಗಳ ಹೆಚ್ಚುತ್ತಿರುವ ಸಂತತಿ ಎಲ್ಲರಿಗೂ ಕಳವಳ ಉಂಟುಮಾಡುತ್ತದೆ ಆದರೆ ಹಲವರಿಗೆ ವಿನೋದವನ್ನೂ ನೀಡುತ್ತದೆ.
ನಮ್ಮ ವಸತಿ ಸಂಕೀರ್ಣದಲ್ಲಿರುವ ಈ ಬೆಕ್ಕುಗಳು ತಮ್ಮ ಪ್ರದೇಶದ ಬಗ್ಗೆ ಕಟ್ಟುನಿಟ್ಟಾದ ಗಡಿ ಗುರುತುಗಳನ್ನು ಹೊಂದಿವೆ. ನೆಲಮಹಡಿ, ಮೊದಲ ಮತ್ತು ಎರಡನೇ ಮಹಡಿಯ ಬೆಕ್ಕುಗಳು, ತೀವ್ರ ಹಸಿವೆಯಾದಾಗ ನಿಯಂತ್ರಣ ರೇಖೆಯಾಚೆಗಿನ ಅಡುಗೆಮನೆಗಳತ್ತ ಆಕರ್ಷಣೆ ಹುಟ್ಟದ ಹೊರತು ತಮ್ಮ ಮಹಡಿಗಳಲ್ಲೇ ಇರುತ್ತವೆ. ಟೆರೇಸ್ ಅನ್ನು ಅನನ್ಯವಾಗಿ ಮರಿಗಳಿಗೆ ಮೀಸಲಿಡಲಾಗಿದೆ ಮತ್ತು ಉಳಿದವಕ್ಕಿಂತ ಸಮೃದ್ಧವಾಗಿರುವ ಕೆಲವು ಬೆಕ್ಕುಗಳು ಒಮ್ಮೊಮ್ಮೆ ಮೈನೆಕ್ಕಿಕೊಳ್ಳಲು ಮತ್ತು ಸೂರ್ಯಸ್ನಾನ ಮಾಡಲು ಬರುತ್ತವೆ. ವಾಚ್ಮನ್ ತೂಕಡಿಸುತ್ತ ಕೂರುವ ಆತನ ಕ್ಯಾಬಿನ್ನಂಥ ಇಕ್ಕಟ್ಟಾದ ಸ್ಥಳಗಳಲ್ಲಿ ಗುರುಗುಡುತ್ತ ನಿದ್ರಿಸಲು ಕೆಲವು ಬೆಕ್ಕುಗಳು ಸ್ಥಳ ಕಂಡುಕೊಂಡಿವೆ. ದೇವರು ಈ ಬೆಕ್ಕುಗಳಿಗೆ ಎರಡು ಧ್ವನಿಪೆಟ್ಟಿಗೆಗಳನ್ನು ಕರುಣಿಸಿದ್ದಾನೆ, ಒಂದು ಗುರುಗುಟ್ಟಲು ಮತ್ತು ಇನ್ನೊಂದು ಮಿಂಯಾವ್ ಎನ್ನುವ ಶಬ್ದ ಹೊರಡಿಸಲು ಹಾಗೂ ವಿಶೇಷ ಸಂದರ್ಭಗಳಂದು ನಮ್ಮ ವಸತಿ ಸಂಕೀರ್ಣದ ಕೆಲವು ಬೆಕ್ಕುಗಳು ತಮ್ಮ ರಾತ್ರಿ ಆರ್ಕೆಸ್ಟ್ರಾದ ಮೂಲಕ ಎಲ್ಲ ನಿವಾಸಿಗಳನ್ನು ಎಚ್ಚರವಾಗಿರಿಸುತ್ತವೆ.
ಸ್ವಚ್ಛತೆಯ ಬಗ್ಗೆ ಭಾರೀ ಕಾಳಜಿ ಮಾಡುವ ಕೆಲವು ನಿವಾಸಿಗಳು ಈ ಬೂದು ಬೆಕ್ಕುಗಳನ್ನು ಕಂಡಾಗ ಸಿಡಿಮಿಡಿಗೊಳ್ಳುತ್ತಾರೆ. ಈ ಬೆಕ್ಕುಗಳನ್ನು ಚಾಟಿಯಿಂದ ಬಡಿದು ಓಡಿಸಬೇಕು ಎನ್ನುವುದು ಅಂಥ ನಿವಾಸಿಗಳಲ್ಲಿನ ಕೆಲವರ ಅಭಿಪ್ರಾಯ. ಆದರೆ ಈ ಪಾರಿವಾಳಗಳಿಗೆ ಬೆಕ್ಕು ಯಾವ ಕಡೆಗೆ ಹಾರುತ್ತದೆ ಎನ್ನುವುದು ತಿಳಿದಿರುವುದಿಲ್ಲ. ಅಂದಹಾಗೆ, ಬೆಕ್ಕಿಗೆ ಗಂಟೆ ಯಾರು ಕಟ್ಟುತ್ತಾರೆ ಎನ್ನುವುದು ನಮಗೆ ತಿಳಿದಿಲ್ಲ!